ಸೀರಿಯಲ್ ಲೋಕದ ಚಾಕಲೇಟ್ ಬಾಯ್ ಸ್ಕಂದ ಅಶೋಕ್

ಮುದ್ದು ಮುಖದ ತುಂಬಾ ಸದಾ ಮುಗುಳುನಗು ಹೊಂದಿರುವ ಈ ಚಾಕಲೇಟ್ ಬಾಯ್ ಹೆಸರು ಸ್ಕಂದ ಅಶೋಕ್. ಈಗಾಗಲೇ ಮಲಯಾಳಂ, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿರುವ ಚಿಕ್ಕಮಗಳೂರಿನ ಚೆಲುವ ಇಂದು ರಮಣನೆಂದೇ ಚಿರಪರಿಚಿತ. ಕಲರ್ಸ್ ಕನ್ನಡ ವಾಹಿನಿಯ ರಾಧಾ ರಮಣ ಧಾರಾವಾಹಿಯ ರಮಣನಾಗಿ ಗಮನ ಸೆಳೆದಿರುವ ಸ್ಕಂದ ಅಶೋಕ್ ಸೀರಿಯಲ್ ಪ್ರಿಯರ ಮನದಲ್ಲಿ ಸ್ಥಾನ ಪಡೆದಾಗಿದೆ.

Continue reading “ಸೀರಿಯಲ್ ಲೋಕದ ಚಾಕಲೇಟ್ ಬಾಯ್ ಸ್ಕಂದ ಅಶೋಕ್”

ಸೀಮಾಂತರಂಗ

ಈಕೆ ಸುಂದರ ಕಣ್ಣುಗಳ ಚೆಲುವೆ. ಕಳೆದ ವರುಷ ಬೆಂಗಳೂರಿನಲ್ಲಿ ನಡೆದ ಸೌತ್ ಇಂಡಿಯಾ ಕ್ವೀನ್ 2015 ರಲ್ಲಿ ಸೌತ್ ಇಂಡಿಯಾ ಕ್ವೀನ್ ಬ್ಯೂಟಿಫುಲ್ ಐಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಸೀಮಾ ಬುತೆಲ್ಲೊ ಸೌತ್ ಇಂಡಿಯಾ
ಕ್ವೀನ್ ಮತ್ತು ಕರ್ನಾಟಕ ಕ್ವೀನ್ ರನ್ನರ್ ಅಪ್ ಆಗಿ ಕಾಣಿಸಿಕೊಂಡಿದ್ದಾರೆ.

Continue reading “ಸೀಮಾಂತರಂಗ”

ಬಣ್ಣದ ಲೋಕದಲ್ಲಿ ಅನ್ವಿತಾ ಕಮಾಲ್

ಮುದ್ದು ಮುಖದ ತುಂಬಾ ಮುಗುಳುನಗೆ ತುಂಬಿಕೊಂಡಿರುವ ಈಕೆ ಕಡಲ ತೀರದ ಬೆಡಗಿ. ನಟಿಯಾಗಬೇಕು ಎಂಬ ತನ್ನ ಕನಸನ್ನು ನನಸು ಮಾಡಿ ತೋರಿಸಿದ ಈಕೆಯ ಹೆಸರು ಅನ್ವಿತಾ ರಾವ್. ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅನ್ವಿತಾ ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Continue reading “ಬಣ್ಣದ ಲೋಕದಲ್ಲಿ ಅನ್ವಿತಾ ಕಮಾಲ್”

ಮನಸೂರೆಗೊಳ್ಳುವ ಪೇಪರ್ ಜ್ಯುವೆಲ್ಲರಿ

ಕಾಲಕ್ಕೆ ತಕ್ಕ ಹಾಗೆ ಬದಲಾವಣೆಗೊಳ್ಳುವುದರಲ್ಲಿ ಫ್ಯಾಷನ್ ಕೂಡಾ ಒಂದು. ದಿನನಿತ್ಯ ಹೊಸಹೊಸ ಫ್ಯಾಷನ್ ಗಳು ಕಣ್ಣಿಗೆ ಬೀಳುವುದಂತೂ ಸತ್ಯ. ಇಂದು ಫ್ಯಾಷನ್ ಆಗಿ ಕಂಡದ್ದು ನಾಳೆ ಮಾಯ. ಮುಖ್ಯವಾಗಿ ಜ್ಯುವೆಲ್ಲರಿ ವಿಷಯದಲ್ಲಿ ಈಗಾಗಲೇ ಬದಲಾವಣೆ ಆಗಿದೆ ಮತ್ತು ನಿರಂತರವಾಗಿ ಆಗುತ್ತಲೂ ಇದೆ. ಮೊದಲು ಚಿನ್ನ, ಮತ್ತೆ ಬೆಳ್ಳಿ, ಮುಂದೆ ಒಂದು ಗ್ರಾಂ ಚಿನ್ನ, ಚಿನ್ನ ಲೇಪಿತ ಜ್ಯುವೆಲ್ಲರಿ, ಬೆಳ್ಳಿ ಲೇಪಿತ ಜ್ಯುವೆಲ್ಲರಿ, ಫ್ಯಾನ್ಸಿ ಆಭರಣಗಳು ಹೀಗೆ ಗೊಂದಲ ಹುಟ್ಟಿಸುವಷ್ಟು ಆಯ್ಕೆಗಳು ಕಣ್ಣ ಮುಂದಿರುವ ಕಾಲವಿದು.

Continue reading “ಮನಸೂರೆಗೊಳ್ಳುವ ಪೇಪರ್ ಜ್ಯುವೆಲ್ಲರಿ”

ಹುಬ್ಳಿ ಹುಡುಗನಿಗೆ ಜೊತೆಯಾದ ಮಂಗ್ಳೂರು ಹುಡ್ಗಿ; ಮಂಗಳೂರು ಚೆಲುವೆಯ ಬಣ್ಣದ ಪಯಣ

ಮುದ್ದು ಮುಖ, ಅದರ ತುಂಬಾ ಮುದ್ದಾದ ಮುಗುಳು ನಗೆ, ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎಂದೆನಿಸಿಸುವ ಈ ಚೆಲುವೆಯ ಹೆಸರು ರಾಧಿಕಾ ರಾವ್. Continue reading “ಹುಬ್ಳಿ ಹುಡುಗನಿಗೆ ಜೊತೆಯಾದ ಮಂಗ್ಳೂರು ಹುಡ್ಗಿ; ಮಂಗಳೂರು ಚೆಲುವೆಯ ಬಣ್ಣದ ಪಯಣ”

ಕಣ್ಸೆಳೆಯುವ ದಾಸವಾಳದ ಸೌಂದರ್ಯ ಲೀಲೆ

ವರ್ಷವಿಡೀ ಹೂವುಗಳಿಂದ ನಳನಳಿಸುವ ದಾಸವಾಳ ಬರೀ ಅಲಂಕಾರಿಕ ಮತ್ತು ಔಷಧಿಯ ಗುಣ ಹೊಂದಿದ ಸಸ್ಯ ಮಾತ್ರವಲ್ಲ. ಬದಲಿಗೆ ದಾಸವಾಳವನ್ನು ಸೌಂದರ್ಯವರ್ಧಕವನ್ನಾಗಿ ಉಪಯೋಗಿಸುತ್ತಾರೆ.

Continue reading “ಕಣ್ಸೆಳೆಯುವ ದಾಸವಾಳದ ಸೌಂದರ್ಯ ಲೀಲೆ”